ಬಸವನ ಕೊಂದರೋ..

ಬಸವನ ಕೊಂದರೋ ಇವರು ಬಸವನ ಕೊಂದರೋ
ಕೂಡಲಸಂಗಮ ದೇವನ ಪ್ರಿಯ ಭಕ್ತನ ಕೊಂದರೋ
ವಿಶ್ವಮಾನವನ ಮೂರ್ತಿ ಮಾಡಿ ಮೂಲೆಲಿ ಇಟ್ಟರೋ,
ಕಲ್ಲು ಮಣ್ಣಿನ ಕೋಣೆಯಲ್ಲಿ ಬಾಗಿಲ ಹಿಂದೆ ಕುಡಿ ಇಟ್ಟರೋ
ಆಚಾರದ ಅಂಧಕಾರದಲ್ಲಿ ವಿಚಾರದ ಬೆಳಕನ್ನು ಬಿಟ್ಟರೋ
ಬಸವನ ಕೊಂದರೋ, ಬಸವನ ಚಿಂತನೆಯನ್ನು ಕೊಂದರೋ,

ಮಂತ್ರದ ಮಾಯೆಯಲ್ಲಿ ವಚನಗಳ ಮರೆತರೋ
ಭಕ್ತಿಇಲ್ಲದ ಬಸ್ಮದ ಭ್ರಾಂತಿಯಲ್ಲಿ ಹೊಸ ಜಾತಿ ಕಟ್ಟಿದರೋ,
ಸಮಾಜದ ಕಾಳಜಿ ಮಾಡದ ಮಠ-ಪೀಠಕಟ್ಟಿದರೋ
ಬಸವನ ಹೆಸರಿನಲ್ಲಿ ಆಡಂಬರದ ಅಧಿಕಾರದ ಕಿರೀಟತೊಟ್ಟರೋ 
ಬಸವನ ಕೊಂದರೋ, ಬಸವನ ಚಿಂತನೆಯನ್ನು ಕೊಂದರೋ..

Comments