ನೀನೊಂದು ಕವಿತೆ
ಏನೆಂದು ಬರೆಯಲಿ ನಾನು
ಒಲವೇ, ನೀನೇ ಒಂದು ಕವಿತೆ,
ನಿತ್ಯ ನೋಡಿದರೂ ನಿಲುಕದ ನೀರಂತೆ ನೀನು
ನಿನ್ನ ನೋಡಿ ನಾ ಬರೆಯುವುದನ್ನೇ ಮರೆತೆ,
ಪದಗಳೇ ಇಲ್ಲದ ಸಾಲುಗಳಿಗೆ
ಮರುಳು ಮಾಡುವ ಆ ಮುಖವೇ ಮುನ್ನುಡಿ,
ಹಗಲಲ್ಲಿ ಕಂಡೂ ಕಾಣದ ಕನಸುಗಳಿಗೆ
ಬಿಡದೆ ಕಾಡುವ ನಿನ್ನ ಕಣ್ಣುಗಳೇ ಕನ್ನಡಿ,
ಸನಿಹಕೆ ಸೆಳೆಯುವ ಸುಂದರ ಗೀತೆಗೆ
ನಿನ್ನ ಶ್ವಾಸದ ಏರಿಳಿತವೇ ಪ್ರಾಸ,
ಕಿರು ನಗೆಯ ಲಯಬರಿತ ಕಾವ್ಯಕ್ಕೆ
ಶೃತಿಬರಿತ ಸ್ತುತಿ ನಿನ್ನ ಮುಂಗುರುಳು-ಕೈಬೆರಳಿನ ವಿರಸ..
Comments
Post a Comment
What's your take on this..