ನಿನ್ನ ಕನಸಿರಲಿ
ಮನಸಿನಲ್ಲಿ ಸದಾ ನಿನ್ನ ಕನಸಿರಲಿ
ಕನಸಿನಲ್ಲೂ ನಿನ್ನದೆ ಯೋಚನೆ ಕಾಡುತಿರಲಿ
ಕಣ್ಣುಗಳಲ್ಲಿ ಸದಾ ನಿನ್ನ ರೂಪ ತುಂಬಿರಲಿ
ಕಿವಿಗಳಲ್ಲಿ ನಿನ್ನದೆ ಸುಮಧುರ ಧ್ವನಿ ಕೇಳುತಿರಲಿ
ನನ್ನ ಉಸಿರಿಗೆ ನಿನ್ನ ಉಸಿರು ತಾಗುವಷ್ಟು ಹತ್ತಿರ ನೀನಿದ್ದಾಗಲೂ
ನಿನ್ನ ಕಣ್ಣಿಗೆ ಕಾಣದಷ್ಟು ದೂರ ನಾನಿದ್ದಾಗಲೂ
ನನ್ನ ಹೃದಯ ನಿನಗಾಗಿಯೇ ಮಿಡಿಯಲಿ
ನಿನ್ನ ಉಸಿರು ನನ್ನ ಹೆಸರನ್ನೇ ಹೇಳಲಿ
Comments
Post a Comment
write your thoughts..