ಸ್ವಯಂ ಶೋಧನೆ
ನಾ ಬರುವ ಹಾದಿಯ ನಾನೇ ಕಾದಿರುವೆ
ಕಾದಿರುವ ಹಾದಿಗೆ ನಾನೇ ಮುಳ್ಳಾಗುತ್ತಿರುವೆ,
ನನ್ನ ನಾ ಪ್ರಿತಿಸಿದಷ್ಟೇ
ನನ್ನ ನಾ ದ್ವೇಷಿಸುತ್ತಿರುವೆ
ನನಗೆ ನಾ ಹತ್ತಿರವಾದಷ್ಟೆ
ನನ್ನಿಂದ ನಾ ದೂರವಾಗುತ್ತಿರುವೆ,
ನನ್ನ ಹುಡುಕುವ ಪ್ರಯಾಸದಲ್ಲಿ ನನನ್ನೆ ಕಳೆದುಕೊಳುತ್ತಿರುವೆ
ಕಳೆದುಹೋದ ನನ್ನ ನನ್ನೊಳಗೆಯೇ
ಹುಡುಕುತ್ತಾ ಹೊರಟಿರುವೆ,
ನೆನ್ನೆಯ ನನ್ನ ನೆನಪುಗಳಲ್ಲಿ ನಾ ನಾಳೆಯ ನನ್ನ ಮರೆಯುತ್ತಿರುವೆ
ಮರೆತುಹೋದ ನನ್ನ, ನಾ ನನ್ನ
ನೆನಪುಗಳಲ್ಲಿಯೇ ಹುಡುಕುತ್ತಿರುವೆ,
ನನ್ನ ಸೇರಲು ನನ್ನಿಂದಲೇ ಹೊರಟಿರುವೆ
ಹೊರಟಿರುವ ನನಗೆ ನಾನೇ ಅಡ್ಡಿಯಾಗುತ್ತಿರುವೆ..
- Muttu N
I've translated this poem into English as Self Exploration.
Super👏🙌
ReplyDeleteNice❤
ReplyDelete